`ರಂಗವಲ್ಲಿ’, ಪರಂಪರೆ
ರಂಗವಲ್ಲಿ ಸದಾ ಹೊಸತನಕ್ಕೆ ಹಂಬಲಿಸುವ, ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಸಮಾನ ಮನಸ್ಕರ ತಂಡ. ಕನ್ನಡ ಸಾಹಿತ್ಯದ ಮುಖ್ಯ ನಾಟಕಗಳು, ಸಣ್ಣಕತೆ, ಕಾದಂಬರಿ, ಅನುವಾದ ಕೃತಿಗಳನ್ನು ರಂಗಕ್ಕೆ ಅಳವಡಿಸುವ ದೃಷ್ಟಿಯಿಂದ ರಂಗವಲ್ಲಿ ತಂಡ ಕೆಲಸ ಮಾಡುತ್ತಿದೆ. ರಂಗವಲ್ಲಿಯು ಕಳೆದ 18ವರ್ಷಗಳಲ್ಲಿ 18 ನಾಟಕಗಳು ಹಾಗೂ ಅಸಂಖ್ಯ ಮರುಪ್ರದರ್ಶನಗಳನ್ನು ನಿರಂತರವಾಗಿ ನೀಡುತ್ತ ಬಂದಿದೆ.
ಆತ್ಮ ನಿರೀಕ್ಷಣೆ ರಂಗಭೂಮಿಯ ಗುರಿಗಳಲ್ಲಿ ಒಂದು. ತಿಳಿದವರು ಹೇಳಿರುವಂತೆ ಇದು ಸಮಾಜಕ್ಕೆ ಕನ್ನಡಿ. ಒಬ್ಬ ವ್ಯಕ್ತಿ ತನ್ನ ಆತ್ಮ ನಿರೀಕ್ಷಣೆಗಾಗಿ ಉಪಯೋಗಿಸಬಹುದಾದ ಅತ್ಯುತ್ತಮ ಸಾಧನ. ಇದನ್ನು ಉತ್ತಮವಾಗಿ ರೂಪಿಸಿ ಬಳಸಿಕೊಂಡಲ್ಲಿ, ನಮ್ಮ ಕಾವಲುಗಾರನ/ ಮಾರ್ಗದರ್ಶಕನ ರೀತಿಯಲ್ಲಿ ಕೆಲಸ ಮಾಡುತ್ತದೆ.
ಸುದ್ದಿ, ಸಮಾಚಾರ
ಬನ್ನಿ ನಮ್ಮ ಪರಮೇಶಿ ಪ್ರೇಮಪ್ರಸಂಗ 💕 ನೋಡಿ…
ಇದೇ ಶನಿವಾರ (ಮಾ.15) ಭಾನುವಾರ (ಮಾ.16) ಸಂಜೆ
ಸಂಜೆ 6.30ಕ್ಕೆ | ಕಿರುರಂಗಮಂದಿರ, ಮೈಸೂರು.
ಹಾಸ್ಯ ರಸಾಯನ ಸವಿಯಲು
ಇಂದಿನಿಂದಲೇ ಬಿಡುವು ಮಾಡಿಕೊಳ್ಳಿ.
For tickets: 9880517257/ 9844644480
2024-25ನೇ ಸಾಲಿನ ರಂಗಚಟುವಟಿಕೆಯ ಭಾಗವಾಗಿ ಹೆಸರಾಂತ ರಂಗಕರ್ಮಿ, ನಟ ಶ್ರೀ ಶ್ರೀನಿವಾಸ ಪ್ರಭು ಅವರ ರಚನೆಯ ‘ಪರಮೇಶಿ ಪ್ರೇಮ ಪ್ರಸಂಗ’ ಎಂಬ ಹಾಸ್ಯ ನಾಟಕದ ಸಿದ್ಧತೆ ನಡೆದಿದೆ.